ಸೆಕೆಂಡ್-ಇನ್-ಕಮಾಂಡ್ ಹರ್ಷಪಾಲ್ ಸಿಂಗ್ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿ. ಅವರು ೨೦೦೪ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. ಗಾಯಗೊಂಡಿದ್ದರೂ ಸಹ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಅವರಿಗೆ ೨೦೧೯ ರ ಆಗಸ್ಟ್ ೧೫ ರಂದು (೭೩ನೇ ಸ್ವಾತಂತ್ರ್ಯೋತ್ಸವದ ದಿನ) ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪದಕವಾದ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಯಿತು. ೨೦೧೪ ರಲ್ಲಿ ಸಿಂಗ್‌ ಅವರು ಛತ್ತೀಸ್ಗಢದ ಖುಂಟಿ ಜಿಲ್ಲೆಯಲ್ಲಿ ರೂ.೨ ಲಕ್ಷ (೨೦೨೩ರಲ್ಲಿ ರೂ. ೩.೩ ಲಕ್ಷ ಅಥವಾ £೩,೩೩೪ಕ್ಕೆ ಸಮ) ಬೆಲೆ ಬಹುಮಾನ ಘೋಷಿತ ಒಬ್ಬ ನಕ್ಸಲನನ್ನು ಹತ್ಯೆಗೈದರು. ಖುಂಟಿಯಲ್ಲಿ ನಕ್ಸಲ್ ವಲಯ ಕಮಾಂಡರ್‌ನನ್ನು ಹತ್ಯೆಗೈದಿದ್ದಕ್ಕಾಗಿ ಅವರಿಗೆ ೨೦೧೫ರಲ್ಲಿ ಪೊಲೀಸ್ ಪದಕ (ಶೌರ್ಯ) ನೀಡಲಾಯಿತು ಹಾಗೂ ಅದೇ ವರ್ಷದಲ್ಲಿ, ಅವರಿಗೆ ಜಾರ್ಖಂಡ್‌ ಸರ್ಕಾರದಿಂದ ಪೊಲೀಸ್ ಪದಕವನ್ನು ನೀಡಲಾಯಿತು. == ಉಲ್ಲೇಖಗಳು ==